ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯ ಹುಲಜಂತಿ ಗ್ರಾಮದಲ್ಲಿ ಎಸ್ಬಿಐ ಬ್ಯಾಂಕ್ನಲ್ಲಿ ದರೋಡೆ ಮಾಡಿದ್ದ ಬ್ಯಾಗ್ ಪತ್ತೆಯಾಗಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು. ವಿಜಯಪುರ ಜಿಲ್ಲೆಯ ಚಡಚಣದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಡಚಣದಲ್ಲಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಒಂದು ಬ್ಯಾಗ್ ಪತ್ತೆಯಾಗಿದೆ. ಇದಕ್ಕೂ ಮೊದಲ ಸೆಪ್ಟೆಂಬರ್ 16ರಂದು ದರೋಡೆ ಮಾಡಿಕೊಂಡು ಹೋಗುವಾಗ ಹುಲಜಂತಿನಲ್ಲಿ ಕಾರು, ಬೈಕ್ ಮಧ್ಯೆ ಅಪಘಾತ ಆಗಿತ್ತು. ಆ ಸಂದರ್ಭದಲ್ಲಿ ಕಾರ್ನಲ್ಲಿ 1 ಲಕ್ಷ 3 ಸಾವಿರ ನಗದು, 21 ಗೋಲ್ಡ್ ಪ್ಯಾಕೇಟ್ಸ್ ಸಿಕ್ಕಿತ್ತು. ಸಧ್ಯ ಸಿಕ್ಕಿರು ಬ್ಯಾಗಿನಲ್ಲಿ 41 ಲಕ್ಷ 4 ಸಾವಿರ ನಗದು ಪತ್ತೆಯಾಗಿದೆ. ಅಲ್ಲದೇ, 36 ಪ್ಯಾಕೇಟ್ಸ್ನ 6.54 ಕೆಜಿ ಚಿನ್ನ ಸಿಕ್ಕಿದೆ. ಇನ್ನು ಹುಲಜಂತಿಯಲ್ಲಿ ಸಿಕ್ಕ ವ್ಯಾನ್ನ್ನು ಚಡಚಣ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೇ ಮಹಾರಾಷ್ಟ್ರದ ಮಂಗಳವಾಡಿ ಪೊಲೀಸರು, ಚಡಚಣ ಪೊಲೀಸರಿಂದ ತನಿಖೆ ಮುಂದುವರಿಸಿದ್ದಾರೆ. ಆದಷ್ಟು ಬೇಗನೆ ಉಳಿದ ನಗದು, ಚಿನ್ನ ಹಾಗೂ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದರು.



