ನಿಡಗುಂದಿ ಪಟ್ಟಣದಲ್ಲಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ವಡವಡಗಿ ನೇತೃತ್ವದಲ್ಲಿ. ಸಚಿವ ಆರ್.ಬಿ.ತಿಮ್ಮಾಪುರ್ ರವರ ೬೪ನೇ ಜನ್ಮದಿನಾಚರಣೆಯನ್ನು ತಾಲೂಕು ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡುವುದರೊಂದಿಗೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಗಮೇಶ್ ಬಳಿಗಾರ ಮಾತನಾಡಿ ಆರ್.ಬಿ.ತಿಮ್ಮಾಪುರ್ ರವರು ದೀನ ದಲಿತರ ಆಶಾಕಿರಣ, ಸೋಷಿತ ವರ್ಗಗಳ ಪ್ರಬಲ ಧ್ವನಿ, ಕಾರ್ಮಿಕ ವರ್ಗಕ್ಕೆ ಸದಾ ಕೆಲಸ ಮಾಡುವ ಧೀಮಂತ ನಾಯಕರಾಗಿದ್ದಾರೆ ಎಂದರು.

ಸಚಿವ ಆರ್.ಬಿ.ತಿಮ್ಮಾಪುರ್ ರವರ ೬೪ನೇ ಜನ್ಮದಿನಾಚರಣೆಯನ್ನು ಪಟ್ಟಣದ ಹಿರಿಯ ಪ್ರಾಥಮಿಕ ಶಾಲೆ ಮಣಗೂರ ಶಾಲೆಯ ಮಕ್ಕಳಿಗೆ ನೋಟ್ ಬುಕ್ ಮತ್ತು ಪೆನ್ ವಿತರಣೆ ಮಾಡಿದರು. ಪರಶುರಾಮ್ ಕಾರಿ, ತಮ್ಮಣ್ಣ ಬಡ್ಡಿವಡ್ಡರ, ಸುರೇಶ್ ಸಣಮನಿ.ವಿಠಲ ಹೂಗಾರಲಕ್ಷ್ಮಣ ವಿಭೂತಿ, ಚಂದ್ರಶೇಖರ ರೂಡಗಿ, ಮೂತಿಸಾಬ ಉಣಿಬಾಯಿ,ಆಸಿಫ್ ಹಾಸನಕುಂಟಿ, ಬಸವರಾಜ ವಂದಾಲ, ಶಿವನಗೌಡ ಪಾಟೀಲ, ಆಂಜನೇಯ ಮೋಪಗಾರ, ಬಸವರಾಜ್ ಗಣಾಚಾರಿ, ಷಣ್ಮುಖ ವಂದಾಲ, ಸೇರಿದಂತೆ ಮತ್ತಿತರರಿದ್ದರು.



