ಪೊಲೀಸರ ಫೈರಿಂಗ್ಗೆ ನಟೋರಿಯಸ್ ಹಂತಕ ಯೂನೂಸ್ ಬಲಿಯಾಗಿದ್ದಾನೆ. ಪೊಲೀಸರಿಗೆ ಚಾಕು ತೋರಿಸಿ ರೌಡಿಶೀಟರ್ ಎಸ್ಕೇಪ್ ಆಗಲು ಮುಂದಾದಾಗ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪೊಲೀಸರ ಗುಂಡಿನ ದಾಳಿಗೆ ರೌಡಿಶೀಟರ್ ಸಾವನ್ನಪ್ಪಿದ್ದಾನೆ. ಈ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ರಾಂಪೂರ ಗ್ರಾಮದ ಹೊರ ಭಾಗದಲ್ಲಿ ನಡೆದಿದೆ. ಯುನೂಸ್ ಇಕ್ಲಾಸ್ ಪಟೇಲ್ ಪೊಲೀಸರ ಗುಂಡಿನ ದಾಳಿಗೆ ಬಲಿಯಾದ ರೌಡಿಶೀಟರ್. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಯುನೂಸ್ ಕಾಲಿಗೆ ಫೈರಿಂಗ್ ಮಾಡಿದಾಗ ಈ ಘಟನೆ ನಡೆದಿದೆ.




