ಕರ್ನಾಟಕ ಸರ್ಕಾರ BPL ಕಾರ್ಡ್ ವಂಚಿತರಿಗಾಗಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸರಿಯಾದ ದಾಖಲೆಗಳಿದ್ದರೆ, APL ಕಾರ್ಡ್ಗೆ ಬದಲಾದ ಅರ್ಹರಿಗೆ 45 ದಿನದೊಳಗೆ ಮತ್ತೆ BPL ಕಾರ್ಡ್ ವಿತರಿಸಲಾಗುತ್ತದೆ. ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿ, ‘ಕಾರ್ಡ್ ರದ್ದಾಗಿದ್ದರೂ ಅರ್ಹರಿಗೆ ನಿಗದಿತ ಅವಧಿಯೊಳಗೆ BPL ಕಾರ್ಡ್ ಒದಗಿಸಲಾಗುವುದು’ ಎಂದಿದ್ದಾರೆ. ಅನರ್ಹ ಕಾರ್ಡ್ಗಳನ್ನು ರದ್ದುಪಡಿಸಿ, ಅರ್ಹರಿಗೆ BPL ಕಾರ್ಡ್ ಮರಳಿ ನೀಡಲಾಗುವುದು. ಆದರೆ ಅದಕ್ಕೆ ಸೂಕ್ತ ದಾಖಲೆಗಳೊಂದಿಗೆ 45 ದಿನದೊಳಗೆ ತಹಶೀಲ್ದಾರ್ಗೆ ಮನವಿ ಸಲ್ಲಿಸಬೇಕು. ಒಂದುವೇಳೆ ಸೂಕ್ತ ದಾಖಲೆಗಳಿಲ್ಲದಿದ್ದಾರೆ BPL ಕಾರ್ಡ್ ದೊರೆಯುವುದಿಲ್ಲವೆಂದು ಮಾಹಿತಿ ನೀಡಿದ್ದಾರೆ.




