ಹಿಂದೂ ಸಂಪ್ರದಾಯದ ಪವಿತ್ರ ಹಾಗೂ ಬೇಡಿದ ವರವನ್ನು ಕೊಡುವ ಹಾಸನಾಂಬೆ ದೇವಿಯ ದರ್ಶನಕ್ಕೆ ಲಕ್ಷಾಂತರ ಭಕ್ತರ ದಂಡು ಹರಿದು ಬಂದಿದೆ. ವರ್ಷಕ್ಕೊಮ್ಮೆ ಕೇವಲ 13 ದಿನಗಳ ಕಾಲ ಮಾತ್ರ ದರ್ಶನಕ್ಕೆ ಅವಕಾಶ ವಿರುವುದರಿಂದ, ಭಕ್ತರು ನಾ ಮುಂದು ತಾ ಮುಂದು ಎಂದು ಮುಗಿಬಿದ್ದಿದ್ದಾರೆ. ಇಂದು ದರ್ಶನಕ್ಕೆ ಕೊನೆಯ ದಿನವಾಗಿದ್ದು, ಹಬ್ಬದ ರಜೆ ಇರುವುದರಿಂದ ಭಕ್ತರ ಸಾಲು 8 ಕಿಲೋ ಮೀಟರ್ಗೆ ತಲುಪಿದೆ. ಬುಧವಾರ ಒಂದೇ ದಿನ ಎರಡು ಲಕ್ಷಕ್ಕೂ ಅಧಿಕ ಜನರು ಭೇಟಿ ನೀಡಿದ್ದಾರೆ. ದೀಪಾವಳಿ ಹಬ್ಬದ ರಜೆ ಹಿನ್ನೆಲೆಯಲ್ಲಿ ಹಾಸನಕ್ಕೆ ಬಂದ ಜನಸಂಖ್ಯೆಯು ಹೆಚ್ಚಳವಾಗಿದೆ. ಭದ್ರತೆ ಹೆಚ್ಚಿಸುವಂತೆ ಎಸ್ಪಿ ಮನವಿ ಮಾಡಿಕೊಂಡಿದ್ದರು. ನಿನ್ನೆ ರಾತ್ರಿಯಿಂದಲೇ ಜನರು ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.




