ವರದಾನವಾಯಿತು ‘ಕೆರೆ ತುಂಬುವ ಯೋಜನೆ: ಇಟ್ಟಂಗಿಹಾಳ ಕೆರೆ ಮತ್ತೆ ಭರ್ತಿ, ಗ್ರಾಮಸ್ಥರಲ್ಲಿ ಹರ್ಷದ ಹೊಳೆ!
ಕೆರೆ ತುಂಬುವ ಯೋಜನೆ ಮೂಲಕ ಇಟ್ಟಂಗಿಹಾಳ ಕೆರೆ ಪುನಃ ಭರ್ತಿ ಮಾಡಲಾಗಿದ್ದು, ಗ್ರಾಮಸ್ಥರಲ್ಲಿ ಹರ್ಷದ ಅಲೆ ಎದ್ದಿದೆ. ಸಚಿವ ಎಂ ಬಿ ಪಾಟೀಲ್ ನೀರಾವರಿ ಸಚಿವನಾಗಿದ್ದಾಗ ಈ ಯೋಜನೆ ಕೈಗೆತ್ತಿಕೊಂಡು ಕೃಷ್ಣಾ ನದಿಯಿಂದ ನೀರು ಹರಿಸುವ ಕಾರ್ಯಕ್ಕೆ ಮುಂದಾದಾಗ ಹಲವರು ಅಸಾಧ್ಯವೆಂದಿದ್ದರು. ಕೈ ಕಟ್ಟಿ ಕುಳಿತರು ಆದರೆ ಆ ಅಸಾಧ್ಯವನ್ನು ಸಾಧ್ಯವಾಗಿಸಿದ ಕಾರಣ 2020ರಲ್ಲಿ ತುಂಬಿತ್ತು. ಇದೀಗ ಮತ್ತೆ ಭರ್ತಿಯಾಗಿದೆ. ಇಲ್ಲಿನ ಜನರಿಗೂ ಸಂತಸ ತರಿಸಿದೆ. ನಮ್ಮ ಜನತೆ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ತೃಪ್ತಿ ನನ್ನದು. ಅವರ ಅಭಿಮಾನದ ಮಾತುಗಳಿಗೆ ಆಭಾರಿಯಾಗಿದ್ದೇನೆ.ಎಂದು ಊರಿನ ಜನರು ಸಂತಸದಲ್ಲಿದ್ದಾರೆ ಕೃಷಿಗೆ ಮೂಲಾಧಾರವೇ ನೀರಾವರಿ. ಹೀಗಾಗಿ ಬಸವನಾಡಿನಲ್ಲಿ ನೀರು ಹರಿಸುವ ಕಾರ್ಯಗಳು ಸತತವಾಗಿ ಇಟ್ಟಂಗಿಹಾಳ ಕೆರೆಗೆ ನೀರು ಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು,ಈಗ ನೀರು ಹರಿಸಿದ್ದಾರೆ. ಇದರಿಂದಾಗಿ ಈ ಭಾಗದ ಜಲಸಂಪತ್ತು ಗಣನೀಯವಾಗಿ ವೃದ್ಧಿಯಾಗಲಿದೆ. ರೈತರು ವೆವಸಾಯ ಮಾಡುವ ವೇಳೆಯಲ್ಲಿ ಹೆಚ್ಚಿನ ನೀರಿನ ಸೌಲಭ್ಯವನ್ನು ಪಡೆದಿದ್ದಾರೆ. ಕೃಷಿ ಉತ್ಪಾದನೆಗೆ ಮಾತ್ರವಲ್ಲದೆ ಅನ್ನದಾತರ ಅಭಿವೃದ್ಧಿಗೂ ಬಲ ಬರಲಿದೆ. ಕೃಷಿಗೆ ಬಲ ತುಂಬುವ ಇಂತಹ ಯೋಜನೆಗಳನ್ನು ಮತ್ತಷ್ಟು ಪ್ರದೇಶಗಳಿಗೆ ವಿಸ್ತರಿಸಲಿದ್ದೇವೆ.ಎಂದು ಸಚಿವ ಎಂ ಬಿ ಪಾಟೀಲ್ ಭರವಸೆ ನೀಡಿದ್ದಾರೆ



