ದಿನಾಂಕ್ 8/8/2025 ರಂದು ಬೆಳಗಾವಿಯ ಚನ್ನಮ್ಮ ಸರ್ಕಲ್ ನಾ ಬಳಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ಸಂಘಟನೆಯ ರಾಜ್ಯ ಮಟ್ಟದ ಕಾರ್ಯಕ್ರಮ ಶುರುವಾಗಿ ಸಂಘಟನೆ ಬಲಿಷ್ಠವಾಗಿ ಕಟ್ಟುವುದರ ಬಗ್ಗೆ ಹಾಗೂ ಜಿಲ್ಲೆಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ ಹಲವಾರು ವಿಚಾರಗಳ ಬಗ್ಗೆ ವಿಷಯಗಳನ್ನು ತಿಳಿಸಿ ಎಲ್ಲಾ ಜಿಲ್ಲೆಗಳ ಅಧ್ಯಕ್ಷರಿಗೆ ಇನ್ನೂ ಹೆಚ್ಚಿನ ಜವಾಬ್ದಾರಿ ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಧ್ಯಕ್ಷರು ಮತಿನ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಜಯಕುಮಾರ್, ಪ್ರಾಧಾನ್ ಕಾರ್ಯದರ್ಶಿಯಾದ ಹುಸನಪ್ಪ ಚಲವಾದಿ, ಕಾರ್ಯದರ್ಶಿಯಾದ ಪ್ರಧೀಪ್, ಸಹ ಕಾರ್ಯದರ್ಶಿಯಾದ ಸುನಿಲ್ ಕೊಟ್ಟಬಾಗಿ, ಬೆಳಗಾವಿ ವಿಭಾಗಿಯ ಅಧ್ಯಕ್ಷರಾದ ವಿನೋದ ಮೇತ್ರಿ, ದಕ್ಷಿನ ಕರ್ನಾಟಕ ಅಧ್ಯಕ್ಷರಾದ ಗಿರೀಶ, ಉತ್ತರ ಕರ್ನಾಟಕ ಅಧ್ಯಕ್ಷರಾದ ಪ್ರೇಮ್ ಬಿ, ಬೆಳಗಾವಿ ಜಿಲ್ಲಾಧ್ಯಕ್ಷರಾದ ಕುಮಾರ್ ಕಡಹಟ್ಟಿ ಹಾಗೂ ಸಂಘಟನೆ ಕಾರ್ಯಕರ್ತರು ಉಪಸ್ಥಿತರಿದ್ದರು.



