
ಸರ್ಕಾರಿ ಶಾಲೆಯ ಆವರಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಕೆಬಿಜೆಎನ್ ಎಲ್. ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಕಾರ್ಯಕ್ರಮ ಮಾಡಲಾಯಿತು.
ಆಲಮಟ್ಟಿ : ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ ಮಾತನಾಡಿ
ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಆಲಮಟ್ಟಿಯ ನಾಲ್ಕು ವಿವಿಧ ಶಾಲೆಗಳಿಗೆ ತಲಾ ಒಂದರಂತೆ ಸ್ಮಾರ್ಟ್ ಕ್ಲಾಸ್ , ಸ್ಮಾರ್ಟ್ ಬೋರ್ಡ್ , ಜತೆಗೆ ಪ್ರತಿ ವರ್ಗದ ಪರಿಣಿತರ ಇ- ವಿಷಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.
ಜೊತೆಗೆ ಜಲಾಶಯಕ್ಕೆ ವೀಕ್ಷಣಾ ಗ್ಯಾಲರಿ ನಿರ್ಮಿಸಲಾಗುವುದು ಎಂದರು.
ನೌಕರರ ಸಂಘದ ಅಧ್ಯಕ್ಷ ಎಸ್.ಬಿ.ದಳವಾಯಿ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿಗಳಾದ ವಿ.ಆರ್.ಹಿರೇಗೌಡರ, ತಾರಾಸಿಂಗ್ ದೊಡಮನಿ, ಅರುಣ ಡಿ.ವಿ, ಐ.ಎಲ್. ಕಳಸಾ, ಎನ್.ಕೆ. ಬಾಗಾಯತ್, ಮಹೇಶ ಪಾಟೀಲ, ಶಿವಲಿಂಗ ಕುರೆನ್ನವರ, ಅಹ್ಮದ್ ಸಂಗಾಪುರ, ಜಯಣ್ಣ, ಪಿ.ಎ. ಹೇಮಗಿರಿಮಠ, ಬಿ.ಎಸ್.ಯರವಿನತೆಲಿಮಠ, ಜಿ.ಎಂ. ಕೊಟ್ಯಾಳ, ಎಸ್.ಐ.ಗಿಡ್ಡಪ್ಪಗೋಳ, ರಾಮಕೃಷ್ಣಯ್ಯ , ವೈ.ಎಂ. ಪಾತ್ರೋಟ, ಬಿ.ಜಿ. ಬನ್ನೂರ , ಮಹೇಶ ಗಾಳಪ್ಪಗೋಳ ಮತ್ತಿತರರು ಇದ್ದರು.
ಎರಡು ಸ್ಮಾರ್ಟ್ ಕ್ಲಾಸ್ ನೀಡುವುದಾಗಿ ಬಿ.ಎಸ್. ಚನ್ನಬಸಪ್ಪ ಕಂಪನಿ ಘೋಷಣೆ;
ಧ್ವಜಾರೋಹಣ ಕಾರ್ಯಕ್ರಮದ ಅನಿರೀಕ್ಷಿತ ಅತಿಥಿಗಳಾಗಿ ಆಗಮಿಸಿ ಭಾಗವಹಿಸಿದ್ದ ದಾವಣಗೆರೆಯ ಪ್ರತಿಷ್ಠಿತ ಬಿ.ಎಸ್. ಚನ್ನಬಸಪ್ಪ ಜವಳಿ ಅಂಗಡಿಯ ಮುಖ್ಯಸ್ಥ ಬಿ.ಎಸ್.ಶಿವಕುಮಾರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮೃಣಾಲ ಶಿವಕುಮಾರ ಅವರು ವೈಯಕ್ತಿಕವಾಗಿ ಎರಡು ಶಾಲೆಗಳಿಗೆ ತಲಾ ಎರಡು ಲಕ್ಷ ರೂ ವೆಚ್ಚದ ಸ್ಮಾರ್ಟ್ ಕ್ಲಾಸ್ ಒದಗಿಸುವುದಾಗಿ ಘೋಷಿಸಿದರು.
ಸ್ಮಾರ್ಟ್ ಕ್ಲಾಸ್ ನೀಡಿದ ಬಿ.ಎಸ್. ಶಿವಕುಮಾರ, ಮೃಣಾಲ ಶಿವಕುಮಾರ, ನಿವೃತ್ತರಾದ ದೈಹಿಕ ಶಿಕ್ಷಣ ಶಿಕ್ಷಕ ಗಂಗಾಧರ ಹಿರೇಮಠ, ಸಾವಿತ್ರಿ ಅಂಗಡಿ ಅವರನ್ನು ಸನ್ಮಾನಿಸಲಾಯಿತು.
ಮಕ್ಕಳ ಆಕರ್ಷಕ ಪಥಸಂಚಲನ, ಡಿಎಸ್ ಪ್ಲೇ ನೃತ್ಯಗಳು ಪ್ರದರ್ಶನಗೊಂಡವು.
ಆಲಮಟ್ಟಿ ಡ್ಯಾಂಸೈಟ್ ಶಾಲೆಯಲ್ಲಿ ಶಿಕ್ಷಕಿ ಸಾವಿತ್ರಿ ಅಂಗಡಿ, ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ಪಿಂಜಾರ ಜಂಟಿಯಾಗಿ ಧ್ವಜಾರೋಹಣ ನೆರವೇರಿಸಿದರು. ಬಿ.ಎಸ್. ಯರವಿನತೆಲಿಮಠ, ಸುರೇಶ ಹುರಕಡ್ಲಿ ಮತ್ತಿತರರು ಉಪಸ್ಥಿತರಿದ್ದರು
ಆಲಮಟ್ಟಿಯನ್ನು ಇನ್ನಷ್ಟು ಹೆಚ್ಚು ಪ್ರವಾಸಿ ತಾಣವನ್ನಾಗಿ ಮಾಡಲು ಈಗಾಗಲೇ ಪೂರ್ಣಗೊಂಡಿರುವ ವಾಟರ್ ಅಮ್ಯೂಸ್ ಮೆಂಟ್ ಪಾರ್ಕ್ ಶೀಘ್ರ ಉದ್ಘಾಟಿಸಲಾಗುವುದು,
ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ.ಬಸವರಾಜ.ತಿಳಿಸಿದರು



