ಆಲಮಟ್ಟಿ ಮಹಾರಾಷ್ಟ್ರ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದ್ದರೂ ಆಲಮಟ್ಟಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ 2.65 ಲಕ್ಷ ಕ್ಯುಸೆಕ್ಗೆ ಏರಿಕೆಯಾಗಿದೆ. ಆಲಮಟ್ಟಿ ಡ್ಯಾಂಗೆ ಶುಕ್ರವಾರ ಸಂಜೆ ವೇಳೆಗೆ 2.38 ಲಕ್ಷ ಕ್ಯುಸೆಕ್ ಇದ್ದ ಒಳಹರಿವು ಶನಿವಾರ ಸಂಜೆ 2.65 ಲಕ್ಷ ಕ್ಯುಸೆಕ್ಗೆ ತಲುಪಿದೆ. ಆದರೆ ಕೃಷ್ಣಾ ಜಲಾನಯನ ಮೇಲ್ಭಾಗದಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜಲಾಶಯದಲ್ಲಿ ನೀರು ಸಂಗ್ರಹಣಾ ದೃಷ್ಠಿಯಿಂದ ಹೊರ ಹರಿವಿನ ಪ್ರಮಾಣವನ್ನು ಶನಿವಾರ ಬೆಳಗ್ಗೆ 2.50ಲಕ್ಷ ಕ್ಯುಸೆಕ್ದಿಂದ 2 ಲಕ್ಷ ಕ್ಯುಸೆಕ್ಗೆ ಇಳಿಸಲಾಗಿದೆ.

ಆಲಮಟ್ಟಿ ಜಲಾಶಯದಲ್ಲಿ ಶನಿವಾರ ಸಂಜೆ 518.058 ಮೀಟರ್ ಎತ್ತರದಲ್ಲಿ 98.876ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳಹರಿವು 2,65,944ಕ್ಯುಸೆಕ್ ಇದ್ದರೆ ಹೊರಹರಿವು 2,೦೦,೦೦೦ ಕ್ಯುಸೆಕ್ ಇತ್ತು. ಆಲಮಟ್ಟಿ ಜಲಾಶಯದಿಂದ ಶನಿವಾರ 2 ಲಕ್ಷ ಕ್ಯುಸೆಕ್ ನೀರು ನದಿ ಪಾತ್ರ ಹರಿಸಲಾಯಿತು.



