ಬಾಗಲಕೋಟೆ ಜಿಲ್ಲೆಯ ರಬಕವಿ ತಾಲ್ಲೂಕಿನ ಮಹಾಲಿಂಗಪುರದಲ್ಲಿನ ವೆಂಕಟೇಶ ಆಸ್ಪತ್ರೆಯಲ್ಲಿ ನಾರಾಯಣ ಹೆಲ್ತ್ ಸಹಯೋಗದೊಂದಿಗೆ ಹೃದಯರೋಗ ಚಿಕಿತ್ಸಾ ಸೇವೆಗಳ ಉದ್ಘಾಟನೆ ನೆರವೇರಿಸಿ ಸಚಿವ ಎಂ ಬಿ ಪಾಟೀಲ್ ಮಾತನಾಡಿ. ಇದೀಗ ಮಹಾಲಿಂಗಪುರದಲ್ಲಿ ಈ ಸೇವೆ ಆರಂಭವಾಗಿದೆ. ಇದನ್ನು ಸಾಕಾರಗೊಳಿಸಲು ಶ್ರಮಿಸಿದ ಡಾ. ವೆಂಕಟೇಶ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳು. ಈ ಸಂದರ್ಭದಲ್ಲಿ ಡಾ. ವಿ.ಪಿ. ಕನಕರಡ್ಡಿ ಮೆಮೊರಿಯಲ್ ಕಾಲೇಜ್ ಆಫ್ ನರ್ಸಿಂಗ್ ಉದ್ಘಾಟನೆಯೂ ನೆರವೇರಿತು.

ಕಾರ್ಯಕ್ರಮದಲ್ಲಿ ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀ ಹೆಚ್.ಕೆ. ಪಾಟೀಲ್, ಶ್ರೀ ಆರ್.ಬಿ. ತಿಮ್ಮಾಪುರ್, ಸಂಸದರಾದ ಶ್ರೀ ಪಿ.ಸಿ. ಗದ್ದಿಗೌಡರ್, ಬೀಳಗಿ ಶಾಸಕರಾದ ಶ್ರೀ ಜೆ.ಟಿ. ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಹಾಗೂ ವೈದ್ಯ ವೃಂದ ಮೊದಲಾದವರು ಉಪಸ್ಥಿತರಿದ್ದರು.




