ಗಣೇಶ ಬಂದಾಗಿದೆ, ಕಾಯಿ ಕಡುಬು ತಿಂದಾಗಿದೆ. ಈಗೇನಿದ್ದರೂ ಗಣೇಶನನ್ನು ವಾಪಸ್ ಕಳಿಸಿಕೊಡುವ ಸಂಭ್ರಮ. ಇದಕ್ಕೆ ಗಣೇಶ ವಿಸರ್ಜನೆ ಅಂತ ಕರೆಯಲಾಗುತ್ತದೆ. ಗಣೇಶನನ್ನು ವಾಪಸ್ ಕಳಿಸಿಕೊಡಲು ಮನಸ್ಸಿಗೆ ಸಂಕಟವಾಗುತ್ತದೆ. ಆದರೆ ಸಂಪ್ರದಾಯದ ಭಾಗವಾಗಿರೋದ್ರಿಂದ ಗಣೇಶನ ವಿಸರ್ಜನೆ ಅನಿವಾರ್ಯ. ಒಂದು ದಿನ, ಮೂರು ದಿನ, ಐದು ದಿನ, ಏಳು ದಿನ, ಒಂಬತ್ತು ದಿನ, ಹತ್ತು ದಿನ ಹೀಗೆ ಗಣೇಶನನ್ನು ಹಲವು ದಿನಗಳ ಕಾಲ ಇಟ್ಟು ಪೂಜಿಸಲಾಗುತ್ತದೆ. ಅಂತಿಮವಾಗಿ ಗಣೇಶನನ್ನು ನೀರಲ್ಲಿ ವಿಸರ್ಜಿಸಲಾಗುತ್ತದೆ.

ಅದೇ ರೀತಿ ನಿಡಗುಂದಿ ಪಟ್ಟಣದಲ್ಲಿ ರವಿವಾರ ರಂದು ಐದನೇ ದಿನಕ್ಕೆ ಗಣೇಶನ ವಿಸರ್ಜನೆ ಅದ್ದೂರಿಯಾಗಿ ಜರುಗಿತು. ಪಟ್ಟಣದ ಬಜಾರ್ ರೋಡ್ ಮತ್ತು ಕಾಲೇಜ್ ರೋಡ್ ಮಾರ್ಗವಾಗಿ ಗಣೇಶನ ಮೆರವಣಿಗೆ ಅದ್ದೂರಿಯಾಗಿ ಸಗಿತು. ಇದೆ ವೇಳೆ ಕೋಲಾಟ, ಡೊಳ್ಳು ಕುಣಿತ, ಭಕ್ತಿ ಗೀತೆಗಳು ಹಾಕಿದರು ನಂತರ ಭಕ್ತಾದಿಗಳು ಅನ್ನಪ್ರಸಾದ ಸೇವಿಸಿ ಭಕ್ತರು ಪುನೀತರಾದರು.




