ಆಲಮಟ್ಟಿ ಜಲಾಶಯಲ್ಲಿ ಬುಧವಾರ ಸಂಜೆ 519.58 ಮೀಟರ್ ಎತ್ತರದಲ್ಲಿ 122.659 ಟಿಎಂಸಿ ನೀರು ಸಂಗ್ರಹವಾಗಿದೆ. ಒಳಹರಿವು 59,750 ಕ್ಯುಸೆಕ್ ಇದ್ದರೆ, 50,000 ಕ್ಯುಸೆಕ್ ಹೊರ ಹರಿವು ಇತ್ತು. ಮುಖ್ಯಮಂತ್ರಿಗಳು ಶನಿವಾರ ಕೃಷ್ಣೆಗೆ ಬಾಗಿನ ಅರ್ಪಿಸುವ ಹಿನ್ನಲೆಯಲ್ಲಿ ಆಲಮಟ್ಟಿಯ ಹೆಲಿಪ್ಯಾಡ್, ಜಲಾಶಯದ ದ್ವಾರ ಬಾಗಿಲು, ಜಲಾಶಯ ಮೇಲಿನ ರಸ್ತೆ, ಬಾಗಿನ ಸ್ಥಳ, ಜಲಾಶಯ ವೃತ್ತ, ಪ್ರವಾಸಿ ಮಂದಿರ, ಪತ್ರಿಕಾಗೋಷ್ಠಿ ಸ್ಥಳ, ಊಟದ ಸ್ಥಳ, ಅಹವಾಲು ಸಲ್ಲಿಕೆಗೆ ಸ್ಥಳವಕಾಶ ಸೇರಿದಂತೆ ನಾನಾ ಕಡೆಗಳಲ್ಲಿ ಕೆಬಿಜೆಎನ್ಎಲ್ ಅಧೀಕ್ಷಕ ಅಭಿಯಂತರ ವಿ.ಆರ್.ಹಿರೇಗೌಡರ,ಎಸ್ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ಸಿಪಿಐ ಅಶೋಕ ಚೌಹಾಣ್, ಪಿಡಬ್ಲೂಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ದೊಡಮನಿ ಸೇರಿದಂತೆ ನಾನಾ ಅಧಿಕಾರಿಗಳು ಪ್ರಾಥಮಿಕವಾಗಿ ಪರಿಶೀಲನೆ ನಡೆಸಿದರು.
Video link 👇🏿



