ಸೆಪ್ಟೆಂಬರ್ 5 ಶಿಕ್ಷಕರ ದಿನದ ಕುರಿತು ಮಾತನಾಡಿದ ಅವರು. ನಾವು ಗುರುಗಳ ಬಗ್ಗೆ ಎಷ್ಟು ಹೊಗಳಿದರು ಕಡಿಮೆ. ಯಾಕೆಂದರು ನಾವಿವತ್ತು ಈ ಮಟ್ಟದಲ್ಲಿದ್ದೇವೆ ಮಾತನಾಡುತ್ತಿದ್ದೀವೆಂದರೆ ಅದಕ್ಕೆ ಕಾರಣ ಶಿಕ್ಷಕರು. ನಮಗೆ ಮೊದಲ ಗುರು ತಂದೆ-ತಾಯಿ ಎರಡನೇ ಗುರು ಶಿಕ್ಷಕರು.ನಾವು ಯಾರನ್ನಾದರೂ ನೆನಪಿಸಿ ಕೊಳ್ಳಬೇಕೆಂದರೆ ನಮ್ಮ ಪ್ರಾಥಮಿಕ ಶಾಲೆಯ ಗುರುಗಳನ್ನ ನೆನಪಿಸಿ ಕೊಳ್ಳಬೇಕು. ಸಿಂದಗಿ ತಾಲ್ಲೂಕಿನ ಕೊಂಡಗೂಳಿ ನಮ್ಮೂರು ನಾವು ರೈತರ ಮಕ್ಕಳು ಶಿಕ್ಷಣಕ್ಕಾಗಿ ಸಿಟಿಗೆ ಬಂದು ಇಲ್ಲೇ ನೆಲೆಸಿದ್ದೇವೆ. ಇಬ್ಬರು ಶಿಕ್ಷಕರಿದ್ದರು ಅವರು ಇವತ್ತು ಸ್ವರ್ಗದಲ್ಲಿದ್ದಾರೆ ಒಬ್ಬರು ಆರ್ ಹೆಚ್ ಮಕಾಂದರ್, ದಪೆದಾರ್ ಎಂಬ ಗುರುಗಳಿದ್ದರು ಅವರನ್ನ ಇವತ್ತಿಗೂ ಮರೆಯಲಾಗುವುದಿಲ್ಲ ಎಂದು ತಮ್ಮ ಬಾಲ್ಯದ ಜೀವನವನ್ನ ಹಂಚಿಕೊಂಡರು.




