ವಿಜಯಪುರ ನಗರದಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ವಕೀಲ L L ಉಸ್ತಾದ ಮಾತನಾಡಿ. ಮೊಹಮ್ಮದ್ ಪೈಗಂಬರ್ ಅವರಿಂದಾನೆ ನಾವು, ನಮ್ಮ ಜೀವ, ಜೀವನ, ಹಾಗೂ ರಾಷ್ಟ್ರ, ದೇಶ, ನಾವೇನು ಇಲ್ಲಿ ಜೀವಿಸುತ್ತಿದ್ದೇವೆ ಅದೆಲ್ಲ ಅವರಿಂದಾನೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಕೇವಲ ಕರ್ನಾಟಕ ಅಲ್ಲಾ, ಇಡೀ ವಿಶ್ವವೆ ನಡೆದುಕೊಂಡು ಬರುತ್ತಿದೆ. ಅವರು ಮುಸ್ಲಿಂ ಧರ್ಮ ಗುರು ಮಾತ್ರವಲ್ಲ. ಜಾತಿ, ಮತ, ಬೇಧ ಎಲ್ಲಾ ಮರೆತ ವಿಶ್ವಗುರು ಅವರು. ಇವತ್ತು ವಿಶೇಷವಾಗಿ 1500 ನೇ ಜಯತ್ಯೋತ್ಸವ ಆಚರಿಸುತ್ತಿದ್ದೇವೆ. ಇಡೀ ವಿಶ್ವವೆ ಆಚರಿಸುತ್ತಾರೆ. ಮೊಹಮ್ಮದ್ ಪೈಗಂಬರ್ ರವರ ಕೊಡುಗೆ ಅನನ್ಯ. ಸಂಪೂರ್ಣ ಮಾನವೀಯತೆ, ಮನುಷತ್ವ ಬರಬೇಕಾದರೆ ಒಂದು ಒಳ್ಳೆಯ ಆಚಾರಧಾರೆ ಬರಬೇಕಾದರೆ ಅವರ ಚಾರಿತ್ರ್ಯ ಓದಬೇಕು. ಇವರ ಬಗ್ಗೆ ಅದೆಷ್ಟೋ ಸಂಶೋಧನಾಕಾರರು ಸಂಶೋಧನೆ ಮಾಡಿದ್ದಾರೆ. ಬೇರೆ ಬೇರೆ ಧರ್ಮ, ಜಾತಿಯವರು ಅದನ್ನ ಪಾಲನೆ ಮಾಡುತ್ತಿದ್ದರು. ನಿನ್ನೆ ಗಂಧದ ಕಾರ್ಯಕ್ರಮ ಮುಗಿದಿದೆ. 1990-92 ರಲ್ಲಿ ಜೂಲುಸ್ ನಡೆಯುವ ಸಮಯದಲ್ಲಿ ನಮ್ಮ ಮುಸ್ಲಿಂ ಯುವಕರು ಬ್ಯಾಂಜೊ, ಕುಣಿತ, ಕುಡಿತ ಬಹಳಷ್ಟಿತ್ತು. ಅದು ನನಗೆ ಇಷ್ಟವಾಗಲಿಲ್ಲ, ಯಾಕೆಂದರೆ ಇಂತಹ ಪವಿತ್ರ ದಿನದಂದು ಇವರೆಲ್ಲ ಇಂತಹ ಕೆಲಸ ಮಾಡುತ್ತಾರಲ್ಲ ಎಂದು DYSP, DC, SP ಇವರೆಲ್ಲರ ಜೊತೆಗೆ ಸಭೆ ಮಾಡಿ ಬ್ಯಾನ್ ಮಾಡಿಸಿದೆ. ಆದ ಕಾರಣ ನಾವು ಎಲ್ಲರ ಹಿತದೃಷ್ಟಿಯಿಂದ ಶಾಂತಿಯುತವಾಗಿ ವಿಜೃಂಭಣೆಯಿಂದ ಈದ್ ಮಿಲಾದ್ ಆಚರಣೆ ಮಾಡುತ್ತಿರುವುದಾಗಿ ತಿಳಿಸಿದರು.
ಸೆಪ್ಟೆಂಬರ್ 5 ಶಿಕ್ಷಕರ ದಿನದ ಕುರಿತು ಮಾತನಾಡಿದ ಅವರು. ನಾವು ಗುರುಗಳ ಬಗ್ಗೆ ಎಷ್ಟು ಹೊಗಳಿದರು ಕಡಿಮೆ. ಯಾಕೆಂದರು ನಾವಿವತ್ತು ಈ ಮಟ್ಟದಲ್ಲಿದ್ದೇವೆ ಮಾತನಾಡುತ್ತಿದ್ದೀವೆಂದರೆ ಅದಕ್ಕೆ ಕಾರಣ ಶಿಕ್ಷಕರು. ನಮಗೆ ಮೊದಲ ಗುರು ತಂದೆ-ತಾಯಿ ಎರಡನೇ ಗುರು ಶಿಕ್ಷಕರು. ಯಾರನ್ನಾದರೂ ನೆನಪಿಸಿ ಕೊಳ್ಳಬೇಕೆಂದರೆ ನಮ್ಮ ಪ್ರಾಥಮಿಕ ಶಾಲೆಯ ಗುರುಗಳನ್ನ ನೆನಪಿಸಿ ಕೊಳ್ಳಬೇಕು ಎಂದು ತಮ್ಮ ಬಾಲ್ಯದ ಜೀವನವನ್ನ ಮೆಲಕು ಹಾಕಿದರು.
ನಾನು ಇದ್ದಿದ್ದನ್ನ ಇದ್ದಂಗೆ ಹೇಳುವ ನೇರ ನುಡಿಯವನು ಇದರಿಂದ ಜನರಿಗೆ ತಪ್ಪು ತಿಳುವಳಿಕೆ ಯಾಗುತ್ತದೆ. ಗಣೇಶ ವಿಸರ್ಜನೆ ವೇಳೆ ಡಿಜೆ ಬ್ಯಾನ್ ಮಾಡಬೇಕು. ದೇವರೆಂದು ಹೇಗೆ ನಂಬಬೇಕು ಗಣೇಶನ ಮುಂದೆ ಕುಡಿಯುವುದು, ಕುಣಿಯುವುದು ಪೂಜೆ ಪುನಸ್ಕಾರಗಳಿಲ್ಲ ಮಂತ್ರಗಳಿಲ್ಲ ಇದು ಹಬ್ಬವೇ ಎಂದು ಪ್ರಶ್ನಿಸಿದರು. ಇದರಿಂದ ಇವತ್ತಿನ ಯುವಕರಿಗೆ ಏನು ಸಂದೇಶ ಹೋಗುತ್ತಿದೆ. ಡಿಜೆ ಬ್ಯಾಂಜೊಗಳು ಯುವಕರನ್ನು ದಾರಿ ತಪ್ಪಿಸುತ್ತಿವೆ. ದೊಡ್ಡವರಾದ ನಾವೇ ಯುವಕರಿಗೆ ದುಡ್ಡು ಕೊಟ್ಟು ಕೆಡಿಸುವ ಕೆಲಸವಾಗುತ್ತಿದೆ. ಇದು ಅಳಿಸಿ ಹಾಕಬೇಕು. ಮಂತ್ರ ಪಠಣಗಳನ್ನು ಗಣೇಶನ ಮುಂದೆ ಹಚ್ಚಲ್ಲಿ, ಅದನ್ನ ಬಿಟ್ಟು ನಾವೇ ದುಡ್ಡು ಕೊಟ್ಟು ಯುವಕರನ್ನು ದುಶ್ಚಟಕ್ಕೆ ಕಳಿಸಿದಂತಾಗಿದೆ ಆದ್ದರಿಂದ ಡಿಜೆ ಬ್ಯಾನ್ ಆಗಬೇಕೆಂದರು.
VIDEO LINK 👇🏻



