ವಿಜಯಪುರ ಶಹರದಲ್ಲಿ ಇತ್ತಿಚಿಗೆ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಸದರಿ ಪ್ರಕರಣಗಳ ಪತ್ತೆ ಕುರಿತು, ವಿಜಯಪುರ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ ಬಸವರಾಜ ಯಲಿಗಾರ, ಗೋಲಗುಂಬಜ್ ಸಿಪಿಐ ಮಲ್ಲಯ್ಯ ಮಠಪತಿ, ಎಪಿಎಮ್ಸಿ ಪೊಲೀಸ್ ಠಾಣೆ ಪಿಎಸ್ಐ ಬಸವರಾಜ ತಿಪರಡ್ಡಿ ನೇತೃತ್ವದಲ್ಲಿ ಎಪಿಎಮ್ಸಿ ಪೊಲೀಸ್ ಠಾಣೆ ಪಿಎಸ್ಐ ಎನ್.ಬಿ. ಉಪ್ಪಲದಿನ್ನಿ ಹಾಗೂ ಸಿಬ್ಬಂದಿ ಆಸೀಫ್ ಗುಡಗುಂಟಿ, ಎಸ್.ಬಿ.ತೆಲಗಾಂವ,ಲಕ್ಷ್ಮಣ.ಎಮ್.ಬಿರಾದಾರ, ರಮೇಶ ಜಾಧವ, ಸಂತೋಷ ಮೇಲಸಕ್ರಿ, ಆನಂದ ಹಿರೇಕುರಬರ, ಎಸ್.ಆರ್.ಪೂಜಾರಿ, ಸುರೇಶ ಕುಂಬಾರವರನ್ನೊಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ. ಸದರಿ ತನಿಖಾ ತಂಡವು ದಿನಾಂಕ: 06-09-2025 ರಂದು ಬೆಳಿಗ್ಗೆ 09.30 ಗಂಟೆಯ ಸುಮಾರಿಗೆ ಇಂಡಿ ರೋಡ್ ಜ್ಯೋತಿ ಫ್ಯಾಕ್ಟರಿ ಹತ್ತಿರ ಆರೋಪಿತರಾದ ವೀರಭದ್ರ ಶಿವಶರಣ ಕುಂಬಾರ, 31 ವರ್ಷ, ಉದ್ಯೋಗ: ಚಾಲಕ ಸಾ| ಗಣಿಹಾರ ತಾ| ಸಿಂದಗಿ, ಶ್ರೀಶೈಲ ಶಂಕ್ರೇಪ್ಪ ಬಿರಾದಾರ, 31 ವರ್ಷ, ಉದ್ಯೋಗ: ಚಾಲಕ, ಸಾ॥ ಗಣಿಹಾರ ತಾ| ಸಿಂದಗಿ ಇವರುಗಳನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿ, ಆರೋಪಿತರ ಕಡೆಯಿಂದ ವಿಜಯಪುರ ಶಹರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 13 ಹೋಂಡಾ ಶೈನ್ ಮೋಟಾರ್ ಸೈಕಲ್ಗಳು ಮತ್ತು 04 ಹಿರೋ ಕಂಪನಿಯ ಮೋಟಾರ್ ಸೈಕಲ್ಗಳು ಹೀಗೆ ಒಟ್ಟು 17 ಮೋಟಾರ್ ಸೈಕಲ್ಗಳನ್ನು ಜಪ್ತ ಮಾಡಿಕೊಂಡಿದ್ದು, ಅವುಗಳ ಅಂದಾಜು ಮೌಲ್ಯ 11,00,000/- ರೂ. ಆಗಿರುತ್ತದೆ. ಇದೆ ವೇಳೆ ಸದರಿ ಪ್ರಕರಣದಲ್ಲಿ ಕರ್ತವ್ಯ ನಿರ್ವಹಿಸಿ ಪತ್ತೆ ಹಚ್ಚಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಶ್ಲಾಘಿಸಲಾಯಿತು.




