ಸರಕಾರದ ವಿವಿಧ ಯೋಜನೆಗಳಿಗೆ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ SP ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮನಗೌಡ ಹಟ್ಟಿ, ಉಪಾಧೀಕ್ಷಕ ಬಸವರಾಜ ಯಲಿಗಾರ, ಗೋಲಗುಂಬಜ್ ಸಿಪಿಐ ಮಲ್ಲಯ್ಯ ಮಠಪತಿ ಮಾರ್ಗದರ್ಶನದಲ್ಲಿ ಸಿತಾರಾಮ ಲಮಾಣಿ, ವಿಜಯಕುಮಾರ ತಂದೆ ನಿಂಗಪ್ಪ ಗುಮಶೆಟ್ಟಿ ಆಹಾರ ನಿರೀಕ್ಷಕರು ವಿಜಯಪುರ ಜಂಟಿ ಕಾರ್ಯಾಚರಣೆಯಲ್ಲಿಆದರ್ಶನಗರ ಠಾಣೆ ಪಿಎಸ್ಐ ಪಿ.ಎಸ್.ಕುಚಬಾಳ, ಹಾಗೂ ಆದರ್ಶನಗರ ಠಾಣಾ ಸಿಬ್ಬಂದಿಗಳಾದ ಆರ್.ಎಸ್.ಮರೆಗುದ್ದಿ, ಪಿ.ಎಸ್.ಆಜೂರ, ಮಸ್ತಾನ ಬಗಲಿ, ಸೇರಿಕೊಂಡು ದಿನಾಂಕ: 12.09.2025 ರಂದು ಸಾಯಂಕಾಲ 4.45 ಗಂಟೆಯ ಸುಮಾರಿಗೆ ವಿಜಯಪುರ ಶಹರದ ವಿಜಯಾ ಟಾರ್ಸ್ ಎದರುಗಡೆ ಸರ್ವೀಸ್ ರಸ್ತೆಯಲ್ಲಿ ಅನಧೀಕೃತವಾಗಿ ಲಾರಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದಾಗ ದಾಳಿ ನಡೆಸಿ, ಆರೋಪಿತರಾದ ಗಜಾನನ ಭಿರಪ್ಪ ಮಕಾಳೆ, ಸಾ: ಆಜೂರ, ಮಾರುತಿ ದೊಡಮನಿ ಸಾ: ಗಣೇಶವಾಡಿ, ಇಕ್ಬಾಲ್ ತಹಶಿಲ್ದಾರ, ಸಾ: ಅಜಾದ ನಗರ, ಬೆಳಗಾವಿ ಆರೋಪಿತರಲ್ಲಿ ಆರೋಪಿ-1 ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ತಮ್ಮ ಪಾಯ್ದೆಗೋಸ್ಕರ ಸರಕಾರದಿಂದ ಯಾವುದೇ ಲೈಸನ್ಸ್ ಪಡೆಯದೇ ವಿಜಯಪುರದಲ್ಲಿರುವ ಎಫ್ಸಿಐ ರೈಲ್ವೆ ಗೂಡ್ಸ್ ಶೆಡ್ಡಿನಿಂದ ಪಡೆದುಕೊಂಡು ತರುವಂತೆ ಆರೋಪಿತ ನಂ. 2 & 3 ನೇದವರು ತಿಳಿಸಿರುವುದಾಗಿ ಹೇಳಿದ್ದು, 426 ಅಕ್ಕಿ ಚೀಲಗಳು ತೂಕ: 21,043 ಕೆಜಿ (210.43 ಕ್ವಿಂಟಾಲ್) 1 ಕೆಜಿ ಅಕ್ಕಿಗೆ 22.63 ರೂ. ಹೀಗೆ ಒಟ್ಟು 4,76,310/- ಮೌಲ್ಯದ, ಅಶೋಕ ಲೈಲ್ಯಾಂಡ ಲಾರಿ ನಂ: ಎಮ್ಹೆಚ್-46/ಎಫ್-2761, ಒಟ್ಟು 5,00,000 ಮೌಲ್ಯದ ಲಾರಿ ಹಾಗೂ ಅಕ್ಕಿಯ ದಾಸ್ತಾನನ್ನು ವಶಕ್ಕೆ ಪಡೆದುಕೊಂಡು, ಪಡಿತರ ಅಕ್ಕಿಯನ್ನು ಸರಕಾರಿ ಕೆಎಫ್ಸಿಎಸ್ಸಿ ಸಗಟು ಮಳಿಗೆ ಸಂಖ್ಯೆ: 2 ರಲ್ಲಿ ಇಡಲಾಗಿರುತ್ತದೆ. ಈ ಕುರಿತು ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದರಿ ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ, ಉತ್ತಮ ಕರ್ತವ್ಯ ನಿರ್ವಹಿಸಿದ ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯವನ್ನು ಎಸ್ಪಿ ನಿಂಬರಗಿ ಶ್ಲಾಘಿಸಿದ್ದಾರೆ.




