ಕನ್ನಡದ ಯೂಟ್ಯೂಬರ್ ಮುಕಳೆಪ್ಪ ನಕಲಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್ ಜಿಹಾದ್ ಆರೋಪ ಮಾಡಿರುವ ಕಾರ್ಯಕರ್ತರ ಪ್ರಕಾರ, ಮುಕಳೆಪ್ಪ ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದು, ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನ ಪುಸಾಲಯಿಸಿ ಅವಳ ಮನ ಪರಿವರ್ತನೆ ಮಾಡಿ ವಿವಾಹವಾಗಿದ್ದಾನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ವಿವಾಹ ನೋಂದಣಿಯಾಗಿದೆ. ೪ ತಿಂಗಳ ಹಿಂದೆ ಕಿಡ್ನಾಪ್ ಮಾಡಿದ್ದಾನೆಂದು ಯುವತಿಯ ಪೋಷಕರು ಕೂಡ ಪೊಲೀಸರಿಗೆ ದೂರು ನೀಡಿದ್ದು, ರಿಲ್ಸ್ ಮದುವೆಯನ್ನೇ ರಿಯಲ್ ಮದುವೆಯಂದು ತಮ್ಮ ಮಗಳನ್ನು ಮರುಳು ಮಾಡಿ ಮದುವೆಯಾಗಿದ್ದಾನೇ . ಆಕೆಯನ್ನು ವಾಪಾಸ್ ಕರೆಸಿಕೊಡಬೇಕೆಂದು ಮನವಿ ಮಾಡಿದ್ದಾರೆ.
VIDEO LINK 👇🏻



