ಯಾದಗಿರಿಯಲ್ಲಿ ಬುಧವಾರ ಪತ್ನಿಯ ಶೀಲವನ್ನು ಶಂಕಿಸಿ, ಪತಿ ಶರಣಪ್ಪ ತನ್ನ ಇಬ್ಬರು ಮಕ್ಕಳಾದ ಭಾರ್ಗವ್ (5) ಮತ್ತು ಸಾನ್ವಿ (3) ಅವರನ್ನು ಕೊಲೆ ಮಾಡಿದ್ದಾನೆ. ತನ್ನ ಮೂವರು ಮಕ್ಕಳಲ್ಲಿ ಹಿರಿಯ ಮಗ ಹೇಮಂತ್ (8) ನನ್ನು ಕೊಲ್ಲಲು ಯತ್ನಿಸಿದರೂ, ಆತ ಪ್ರಾಣಾಪಾಯದಿಂದ ಪಾರಾಗಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅನುಮಾನಿಸಿ ಈ ಕೃತ್ಯ ಎಸಗಿದ ಆರೋಪಿ ಶರಣಪ್ಪ, ಮಕ್ಕಳನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಸಂಬಂಧ ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ.




