ವಿಜಯಪುರದ ಚಿಕ್ಕಸಿಂದಗಿ ಗ್ರಾಮಕ್ಕೆ ತಲುಪಿದ ರಾಜು ತಾಳಿಕೋಟಿ ಶರೀರ. ನೂರಾರು ಸಂಖ್ಯೆಯಲ್ಲಿ ರಂಗಭೂಮಿ ಕಲಾವಿದರಿಂದ ಅಂತಿಮ ದರ್ಶನ ನಡೆಯಲಿದೆ. ರಂಗಾಯಣ ನಿರ್ದೇಶಕರಾಗಿದ್ದ ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಅವರ ಪಾರ್ಥಿವ ಶರೀರ ನೋಡಲು ವಿಜಯಪುರ, ಬಾಗಲಕೋಟೆ, ಬೆಳಗಾವಿ, ಬೀದರ, ಕಲಬುರ್ಗಿ ಸೇರಿದಂತೆ ಹಲವು ಜಿಲ್ಲೆಗಳಿಂದ ಅಭಿಮಾನಿಗಳು ಆಗಮಿಸಿದ್ದಾರೆ. ರಾಜು ತಾಳಿಕೋಟೆ ನಿರ್ಮಿಸಿದ್ದ ರಂಗಾಶ್ರಯ ಕಲ್ಯಾಣ ಮಂಟಪದಲ್ಲೇ ಅಂತಿಮ ದರ್ಶನ ನಡೆಯುತ್ತದೆ. ರಾಜು ತಾಳಿಕೋಟಿ ಅವರ ತೋಟದ ಮನೆಯಲ್ಲಿ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಹಿಂತಾ ಅಪ್ರತಿಮ ಕಲಾವಿದನನ್ನು ಕಳೆದುಕೊಂಡ ಕಲೆಗಳ ನಾಡು ಇಂದು ಮೌನಕ್ಕೆ ಜಾರಿದೆ. ಬರದ ನಾಡಿನಲ್ಲಿ ಅಸಮಾಧಾನದ ಕಪ್ಪು ಮೋಡ ಆವರಿಸಿದೆ. ಎಲ್ಲರ ಕಣ್ಣಲ್ಲಿ ಕಂಬನಿಯ ಮಳೆ ಸುರಿಯುತ್ತಿದೆ.





