ಚಿತ್ರದುರ್ಗ ಜಿಲ್ಲೆಯಲ್ಲಿ ಶುಕ್ರವಾರದಂದು ವಸತಿ ಮತ್ತು ವಕ್ಫ್ ಹಾಗೂ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲಾ ಪ್ರವಾಸ ಕೈಗೊಂಡು ನಗರದ ಟಿಪ್ಪು ಸುಲ್ತಾನ್ ಕಟ್ಟಿಸಿರುವಂತಹ ಜಾಮಿಯಾ ಮಸೀದಿಯಲ್ಲಿ ನಮಾಜ್ ಮುಗಿಸಿ ಮಾತನಾಡಿದ ಝಮೀರ್ ಅಹ್ಮದ್ ಖಾನ್, ಈ ಮಸೀದಿಯೂ ಸುಮಾರು 300 ವರ್ಷದ ಇತಿಹಾಸವಿದ್ದು, ಜಾಮಿಯಾ ಮಸೀದಿಯನ್ನ ಸ್ವತಂತ್ರ ಹೋರಾಟಗಾರ ಹಜರತ್ ಟಿಪ್ಪು ಸುಲ್ತಾನ್ ಕಟ್ಟಿಸಿದಂತಹ ಮಸೀದಿ ಇದಾಗಿದ್ದು,ಅದ್ರಲ್ಲಿ ನಮಾಜ್ ಮಾಡಿದ್ದೇನೆ. ಅದು ನನ್ನ ಪುಣ್ಯ ಎಂದು ಹೇಳಿದರು. ತದ ನಂತರ ಹೊಳಲ್ಕೆರೆ ರಸ್ತೆಯ ಅಗಸನಕಲ್ಲು ನಗರದಲ್ಲಿ ಅಲ್ಪ ಸಂಖ್ಯಾತರ ಇಲಾಖೆ ಅಡಿಯಲ್ಲಿ ನಿರ್ಮಿಸಲಾದ ಕೊಹಿನೂರ್ ಶಾದಿಮಹಲ್ ನ ಕಟ್ಟಡದ ಶಂಕು ಸ್ಥಾಪನೆ ಮಾಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸುಮಾರು 50 ಕೋಟಿ ಅನುದಾನವನ್ನ ಈ ಜಿಲ್ಲೆಗೆ ಮುಖ್ಯಮಂತ್ರಿ ಹತ್ತಿರ ಮಾತನಾಡಿ ಬಿಡುಗಡೆ ಮಾಡುತ್ತೇನೆ. ನನ್ನ ಜೀವ ಇರೋವರೆಗೂ ಈ ಜಿಲ್ಲೆಯ ಋಣ ತೀರಿಸಲು ಸಾಧ್ಯವಿಲ್ಲ ನಾನು ಎಂದಿಗೂ ನಿಮ್ಮ ಜೊತೆಗೆ ಇರುತ್ತೇನೆ. ನೀವು ಯಾರು ಹೆದರೋ ಅವಶ್ಯಕತೆ ಇಲ್ಲ, ಬಿಜೆಪಿ ಯವರು ಎಷ್ಟೇ ಪ್ರಯತ್ನ ಪಟ್ಟರು ಮುಸ್ಲಿಂ ಸಮಾಜವನ್ನ ಅಲುಗಾಡಿಸಲು ಸಾಧ್ಯವಿಲ್ಲ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯರವರು ನಿಮ್ಮ ಜೊತೆಗೆ ಸದಾ ಇರುತ್ತಾರೆ. ಇದು ನಮ್ಮ ದೇಶ, ನಮ್ಮ ರಾಜ್ಯ, ನಾವು ಕಟ್ಟಿರುವಂತಹ ದೇಶ ಹಿಂದೂ ಜನಾಂಗವರಿಗೆ ಎಷ್ಟು ಪ್ರಮುಖ್ಯತೆ ಇದಯೋ ಅಷ್ಟೇ ಮುಸ್ಲಿಂ ಜನಾಂಗದವರಿಗೆ ಕೂಡ ಇದೆ ಎಂದು ನೇರವಾಗಿ ಆಕ್ರೋಶ ಹೊರ ಹಾಕಿದರು. ಕಾರ್ಯಕ್ರಮದಲ್ಲಿ ಚಳ್ಳಕೆರೆ ಜಾಮಿಯಾ ಮಸೀದಿ ವತಿಯಿಂದ ಜಾಮಿಯಾ ಮಸೀದಿ ಅಧ್ಯಕ್ಷ ಯಾಕೂಬ್ ಅಲಿ ಮತ್ತು ಅವರ ತಂಡ ಸಚಿವರಿಗೆ ಹೂ ಮಾಲೆ ಹಾಕಿ ಶುಭ ಕೋರಿದರು. ಉಪಸ್ಥಿತರಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ರಾಜ್ಯ ವಕ್ಫ್ ಮಾಜಿ ಅಧ್ಯಕ್ಷ ಕೆ.ಅನ್ವರ್ ಭಾಷಾ, ಚಿತ್ರದುರ್ಗ ನಗರಾಭಿವೃದ್ಧಿ ಅಧ್ಯಕ್ಷ ಎಂ ಕೆ ತಾಜೆಪಿರ್, ಆರ್ ಕೆ ಸರ್ದಾರ್, ಝಕೀರ್ ಹುಸೈನ್, ಚಳ್ಳಕೆರೆ ಜಾಮಿಯಾ ಮಸೀದಿ ಸದಸ್ಯ ಕಲೀಮ್ ಉಲ್ಲಾ ಡ್ರೈವರ್, ವಲಿ ಹಬೀಬ್ ತೌಸೀಫ್, ಟಿಪ್ಪು ಖಾಸಿಂ ಅಲಿ, ಬಿ ಕೆ ರಹಮತುಲ್ಲ, ಕರವೇ ಯುವ ಅಧ್ಯಕ್ಷ ನಬಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು.




